ಗಂಧದ ಗುಡಿ ಅಮೋಘವರ್ಷ ಜೆಎಸ್ ನಿರ್ದೇಶಿಸಿದ ೨೦೨೨ ರ ಭಾರತೀಯ ಕನ್ನಡ ಭಾಷೆಯ ಡಾಕ್ಯುಡ್ರಾಮಾ ಚಲನಚಿತ್ರವಾಗಿದೆ. ಇದರಲ್ಲಿ ಸ್ವತಃ ಪುನೀತ್ ರಾಜ್‌ಕುಮಾರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರವು ನಟ ಪುನೀತ್ ರಾಜ್‌ಕುಮಾರ್ ಅವರ ಕನಸಿನ ಕೂಸಾಗಿತ್ತು. ಚಲನಚಿತ್ರವು ೨೮ ಅಕ್ಟೋಬರ್ ೨೦೨೨ ರಂದು ಬಿಡುಗಡೆಯಾಯಿತು. ಪುನೀತ್ ಅವರ ಅನ್ವೇಷಣೆ ಕರ್ನಾಟಕ ರಾಜ್ಯದ ಪರಿಸರ ವ್ಯವಸ್ಥೆ ಮತ್ತು ಅದರ ವಿಶೆಷತೆಯ ಕುರಿತು ಕರ್ನಾಟಕದ ಜನರಿಗೆ ತಿಳಿಸುವುದಾಗಿತ್ತು . == ಆವರಣ == ಪುನೀತ್ ರಾಜ್‌ಕುಮಾರ್ ಅತ್ಯಾಸಕ್ತಿಯ ಪ್ರವಾಸ ಮತ್ತು ಸಾಹಸ ಪ್ರಿಯರು, ಕರ್ನಾಟಕದ ಶ್ರೀಮಂತ ಜೈವಿಕ ವೈವಿಧ್ಯತೆಯನ್ನು ಅನ್ವೇಷಿಸಲು ನಿರ್ಧರಿಸಿದರು ಇದಕ್ಕಾಗಿ ಅವರು ಪ್ರಶಸ್ತಿ ವಿಜೇತ ವನ್ಯಜೀವಿ ಚಲನಚಿತ್ರ ನಿರ್ಮಾಪಕ ಅಮೋಘವರ್ಷ ಜೆಎಸ್ ಅವರೊಂದಿಗೆ ಕೈಜೋಡಿಸಿದರು. ಒಟ್ಟಾಗಿ ಅವರು ರಾಜ್ಯದ ಉದ್ದಗಲ ತಮ್ಮ ಪ್ರಯಾಣವನ್ನು ಪ್ರಾರಂಭಿಸುತ್ತಾರೆ. == ಪಾತ್ರವರ್ಗ == ಸ್ವತಃ ಪುನೀತ್ ರಾಜ್ ಕುಮಾರ್ ಸ್ವತಃ ಅಮೋಘವರ್ಷ ಜೆ.ಎಸ್ ಸ್ವತಃ ಅಶ್ವಿನಿ ಪುನೀತ್ ರಾಜ್‌ಕುಮಾರ್ == ಬಿಡುಗಡೆ == ಚಲನಚಿತ್ರವು ೨೮ ಅಕ್ಟೋಬರ್ ೨೦೨೨ ರಂದು ಬಿಡುಗಡೆಯಾಯಿತು. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಗಂಧದಗುಡಿ @ ಐ ಎಮ್ ಡಿ ಬಿ